ಮಾದಕ ದ್ರವ್ಯಗಳ ವಿರುದ್ಧ ಅಭಿಯಾನ: ಚಿಕ್ಕಮಗಳೂರು

...

ಮಾದಕ ದ್ರವ್ಯಗಳ ವಿರುದ್ಧ ಅಭಿಯಾನದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಮಾದಕ ದ್ರವ್ಯ ಬಳಕೆ ವಿರುದ್ಧ ಜಾಗೃತಿ ಮೂಡಿಸಲು ಚಿಕ್ಕಮಗಳೂರು ನಗರದಲ್ಲಿ ಇಂದು Walkathon ಅನ್ನು ಹಮ್ಮಿಕೊಳ್ಳಲಾಗಿತ್ತು, ಡಾ. ವಿಕ್ರಮ ಅಮಟೆ, IPS, ಪೊಲೀಸ್ ಅಧೀಕ್ಷಕರವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ 1) ಸಿದ್ದೇಶ ಜಿ, ಶ್ರೀ ರಾಮಕೃಷ್ಣ ಪಿಯು ಕಾಲೇಜ್, 2) ಚನ್ನಕೇಶವ ಎಸ್ ವೈ, ಸರ್ಕಾರಿ ಪದವಿ ಪೂರ್ವ ಕಾಲೇಜ್ ಮತ್ತು 3) ಪ್ರಜ್ವಲ್ ಎ ಪಿ, ಎಲ್.ಬಿ.ಎಸ್. ಪಿಯು ಕಾಲೇಜ್ ರವರುಗಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ. ಹೆಚ್. ಡಿ. ತಮ್ಮಯ್ಯ ರವರು ಹಸಿರು ಬಾವುಟವನ್ನು ತೋರಿಸುವ ಮೂಲಕ Walkathon ಗೆ ಚಾಲನೆ ನೀಡಿದರು. Walkathon ನಲ್ಲಿ ವಿವಿಧ ಶಾಲಾ ಕಾಲೇಜಿನ ಸುಮಾರು 1500 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮಲ್ಲಿ ಶ್ರೀಮತಿ. ಮೀನಾ ನಾಗರಾಜ್ ಸಿ ಎನ್, IAS, ಮಾನ್ಯ ಜಿಲ್ಲಾಧಿಕಾರಿಗಳು, ಡಾ. ಅಶ್ವಥ್ ಬಾಬು, ಜಿಲ್ಲಾ ಆರೋಗ್ಯಾಧಿಕಾರಿ, ಡಾ. ಪವಿತ್ರಾ, CIMS, ಶ್ರೀ. ಓಂಕಾರೇಶ್ವರ, ಔಷಧ ನಿಯಂತ್ರಣ ಇಲಾಖೆ, NCORD ಸಮಿತಿ ಸದಸ್ಯರು, ಅಣುವೃತ್ ಸಮಿತಿ, ಬ್ರಹ್ಮಕುಮಾರಿ, ಚಿಕ್ಕಮಗಳೂರು ರೌಂಡ್ ಟೇಬಲ್ ಪದಾಧಿಕಾರಿಗಳು ಭಾಗವಹಿಸಿದ್ದರು. Walkathon ಕಾರ್ಯಕ್ರಮವು ಚಿಕ್ಕಮಗಳೂರು ನಗರದ ಜಿಲ್ಲಾ ಆಟದ ಮೈದಾನದಿಂದ ಪ್ರಾರಂಭವಾಗಿ ಐ.ಜಿ. ರಸ್ತೆ ಮೂಲಕ ಸಾಗಿ ಹನುಮಂತಪ್ಪ ಸರ್ಕಲ್ ಮುಖಾಂತರ ಎಂ.ಜಿ. ರಸ್ತೆಯಲ್ಲಿ ಹಾದು, ಆಜಾದ್ ಪಾರ್ಕ್ ಮುಖಾಂತರ ಸಾಗಿ ಜಿಲ್ಲಾಧಿಕಾರಿಗಳ ಕಛೇರಿಗೆ ಬಂದು ಮುಕ್ತಾಯವಾಗಿರುತ್ತದೆ.




Comments (0)

Please login to post a comment