ವಿಶ್ವ ಫಾರ್ಮಾಸಿಸ್ಟ್ ದಿನಾಚರಣೆ -ಸೆಪ್ಟೆಂಬರ್ 25

...

ವಿಶ್ವ ಫಾರ್ಮಾಸಿಸ್ಟ್ ದಿನಾಚರಣೆ -ಸೆಪ್ಟೆಂಬರ್ 25

ಇಂದು ವಿಶ್ವ ಫಾರ್ಮಸಿ ದಿನಾಚರಣೆ, ವಿಶ್ವಾಸಾರ್ಹತೆ, ನಂಬಿಕೆಯ ಪ್ರತೀಕ ಪಾರ್ಮಾಸಿಸ್ಟ್. ಫಾರ್ಮಾಸಿಸ್ಟ್‌ರು ಔಷಧ ಸಂಶೋದನೆ ,ಉತ್ಪಾದನೆ, ಸಂಗ್ರಹಣೆ, ಔಷಧ ವಿತರಣೆ, ಮಾರಾಟ ಮತ್ತು ಬೋದನೆ ಹೀಗೆ ವಿವಿಧ ವೃತ್ತಿಗಳಿಂದ ಜನರಿಗೆ ಹಾಗೂ ಔಷಧ ವಿಜ್ಞಾನ ಕ್ಷೇತ್ರಕ್ಕೆ ನೀಡುತ್ತಾ ಬಂದಿರುವ ವಿಶ್ವಾಸಾರ್ಹ ಸೇವೆಯನ್ನು ಗೌರವಿಸುವ ಸಲುವಾಗಿ ಕಳೆದ 14ವರ್ಷಗಳಿಂದ (2009 ನೇ ಇಸವಿಯಿಂದ) ಅಂತರಾಷ್ಟ್ರೀಯ ಫಾರ್ಮಸಿ ಫೆಡರೇಶನ್ ಸೂಚನೆಯಂತೆ ಪ್ರತಿ ವರ್ಷ "ಸೆಪ್ಟೆಂಬರ್- 25ನೇ ತಾರೀಕಿನಂದು ಪ್ರತಿ ವರ್ಷ ಹೊಸ ಹೊಸ ಘೋಷವಾಕ್ಯದೊಂದಿಗೆ ವಿಶ್ವ ಫಾರ್ಮಾಸಿಸ್ಟ್‌ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇವರ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಜೊತೆಯಲ್ಲಿ ಈ ವೃತ್ತಿಯ ಮಹತ್ವದ ಕುರಿತಂತೆ ಜನರಿಗೆ ಅರಿವು ಮೂಡಿಸುವ ಪುಯತ್ನ ಮಾಡಲಾಗುತ್ತಿದೆ. ತಮ್ಮ ವಿಶಾಲ ಜ್ಞಾನ ಹಾಗೂ ಅನನ್ಯ ಪರಿಣಿತಿಯಿಂದ ಮಾನವ ಅರೋಗ್ಯ, ರಕ್ಷಣೆಯಲ್ಲಿ ತಮ್ಮದೇ ಆದ ಪಾತ್ರ ನಿರ್ವಹಿತ್ತಿರುವ ಫಾರ್ಮಾಸಿಸ್ಟ್ ಗಳಿಗೆ ಈ ದಿನ ಅರ್ಪಣೆಯಾಗಿದೆ. ಈ ವರ್ಷದ ಘೋಷವಾಕ್ಯ "Pharmacy Strenthening Health System" - "ಫಾರ್ಮಸಿಯು ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು".

ಇತಿಹಾಸ: 1912 ರ ಸೆಪ್ಟೆಂಬರ್ 25 ರಂದು 144 ರಾಷ್ಟ್ರಗಳ ರಾಷ್ಟ್ರೀಯ ಸಂಸ್ಥೆಗಳ ಮೂಲಕ ಪ್ರಪ೦ಚದಾಂದ್ಯಂತ ಲಕ್ಷಾಂತರ ಫಾರ್ಮಾಸಿಸ್ಟ್ ರನ್ನು ಪ್ರತಿನಿದಿಸುವ ಜಾಗತಿಕ ಸಂಸ್ಥೆಯಾದ “ಅಂತರಾಷ್ಟ್ರೀಯ ಫಾರ್ಮಾಸುಟಿಕಲ್ ಫೆಡರೇಶನ್" ವತಿಯಿಂದ ಪ್ರಥಮ ಬಾರಿಗೆ ವಿಶ್ವ ಫಾರ್ಮಾಸಿಸ್ ದಿನಾಚರಣೆಯನ್ನು ಇಸ್ತಾಂಬುಲ್, ಟರ್ಕಿಯಲ್ಲಿ 2009ರ ಸೆಪ್ಟೆಂಬರ್- 25ನೇ ತಾರೀಕಿನಂದು ಪ್ರಾರಂಭಿಸಲಾಯಿತು. ಇದೊಂದು ಜಾಗತಿಕ ಸರ್ಕಾರೇತರ ಸಂಸ್ಥೆಯಾಗಿದ್ದು ನೆದರ್ ಲ್ಯಾಂಡ್ ನಲ್ಲಿ ಮುಖ್ಯ ಕಛೇರಿಯನ್ನು ಹೊಂದಿದ್ದು ಔಷಧಾಲಯ, ಔಷಧಕ್ಕೆ ಸಂಬಂಧಪಟ್ಟ ಶಿಕ್ಷಣ, ಔಷಧ ವಿಜ್ಞಾನ ಹೀಗೆ ಅನೇಕ ವಿಷಯಗಳನ್ನು ಪ್ರತಿನಿಧಿಸುತ್ತಿದೆ.

ಫಾರ್ಮಾಸಿಸ್ಟ್ ಯಾರು? ಒಬ್ಬ ವೈದ್ಯರು ಔಷಧಿಯ ಮೂಲಕ ರೋಗಿಗೆ ಜೀವ ತುಂಬಿದರೆ ....ಆ ಔಷಧಿಗೆ ಒಬ್ಬ ಫಾರ್ಮಾಸಿಸ್ಟ್ ತನ್ನ ಜ್ಞಾನ, ಪರಿಣಿತಿ ಹಾಗೂ ಕೌಶಲ್ಯದ ಮೂಲಕ ಔಷಧಿಗೆ ಜೀವ ತುಂಬುತ್ತಾನೆ. ರೋಗಿಯ ಖಾಯಿಲೆಯನ್ನು ಗುರುತಿಸುವ ವೈಧ್ಯರುಗಳಷ್ಟೆ ಪ್ರಮುಖ ಪಾತ್ರವನ್ನು ಫಾರ್ಮಾಸಿಸ್ಟ್ ಗಳು ಸಹ ನಿರ್ವಹಿಸುತ್ತಾರೆ. ಫಾರ್ಮಾಸಿಸ್ಟರು ಔಷಧಿಗಳನ್ನು ಸಂಶೋಧನೆ ಮಾಡುವುದು ಅಲ್ಲದೆ ನಿಗಧಿತ ಖಾಯಿಲೆಗೆ ಸೂಕ್ತ ಔಷಧಗಳನ್ನು ನೀಡಿ, ಅವುಗಳನ್ನು ಹೇಗೆ, ಯಾವಾಗ, ಯಾವ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂದು ಆಪ್ತ ಸಮಾಲೋಚನೆಯ ಮೂಲಕ ರೋಗ ಗುಣಪಡಿಸಲು ಪ್ರಮುಖ ಪಾತ್ರ ವಹಿಸುತ್ತಾರೆ. ಜನರು ತಮ್ಮ ಔಷಧಿಗಳಿಂದ ಉತ್ತಮವಾದುದನ್ನು ಪಡೆಯಲು ಫಾರ್ಮಾಸಿಸ್ಟ್ ರು ಕಾರಣ. ಅವರು ತಮ್ಮ ಅನುಭವ, ಜ್ಞಾನ ಪರಿಣಿತಿಯನ್ನು ಬಳಸಿ ವೈಧ್ಯಕೀಯ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಲು ಬಳಸುತ್ತಿದ್ದಾರೆ. ನಿಸ್ವಾರ್ಥವಾದ ಮನೋಬಾವನೆಯಿಂದ ರೋಗಿಗಳಿಗೆ ಉತ್ತಮವಾದ ಸೇವೆಯನ್ನು ಸಲ್ಲಿಸುವುದೇ ಫಾರ್ಮಾಸಿಸ್ಟ್ ರ ಮುಖ್ಯ ಧೈಯವಾಗಿದೆ. ವೈಧ್ಯಕೀಯ ಕ್ಷೇತ್ರದಲ್ಲಿ ಫಾರ್ಮಾಸಿಸ್ಟ್ ಗಳ ಸೇವೆ ಅನನ್ಯವಾಗಿದೆ. ವಿವಿಧ ರೋಗಗಳ ವಿರುದ್ಧ ಪರಿಣಾಮಕಾರಿ ಔಷಧ ಅನ್ವೇಷಿಸಿ, ಸಂಶೋಧಿಸಿ, ಕಂಡು ಹಿಡಿದು ಸಂಗ್ರಹಿಸಿ ರೋಗಿಗಳಿಗೆ ಸೂಕ್ತ ಪ್ರಮಾಣದಲ್ಲಿ ಔಷಧ ನೀಡುವಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ, ಆರೋಗ್ಯ ಕ್ಷೇತ್ರದಲ್ಲಿ ಅವಿಭಾಜ್ಯ ಅಂಗ ಎನಿಸಿಕೊಂಡ ಫಾರ್ಮಸಿ ವಿಭಾಗ ಹಲವು ವರ್ಷಗಳಿಂದ ತಮ್ಮದೇ ಆದ ಚಾಪು ಮೂಡಿಸಿದೆ. ಸಾರ್ವಜನಿಕ ಸಂಸ್ಥೆಗಳಲ್ಲಿ ಸೂಕ್ತ ಔಷಧ ಬೇಡಿಕೆ ಪಟ್ಟಿ ಸಲ್ಲಿಸುವುದು, ಔಷಧಿ ಸಂಗ್ರಹಣೆ, ಜೋಡಣೆ, ದಾಸ್ತಾನು ಮಾಡುವುದು, ವೈಧ್ಯರ ಸಲಹಾ ಚೀಟಿಯಂತೆ ರೋಗಿಗಳಿಗೆ ಅವಶ್ಯ ಔಷಧಿ ವಿತರಣೆ, ಔಷಧಗಳ ಸದ್ಬಳಕೆ, ಆಪ್ತ ಸಮಾಲೋಚನೆ, ಅನುಪಾಲನೆ, ರೋಗಗಳ, ರೋಗಿಗಳ, ಔಷಧಿಗಳ ಅಂಕಿ ಅಂಶ ಸಂಗ್ರಹಣೆ, ಲಸಿಕೆ ಸಂಗ್ರಹಣೆ, ದಾಸ್ತಾನು ವಿತರಣೆ, ಶೀತಲ ಸರಪಣಿ ನಿರ್ವಹಣೆ ಮುಂತಾದ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಕಳೆದ 3 ವರ್ಷಗಳಿಂದಲೂ ಕಾಡಿದ ಕರೋನ ಮಹಾಮಾರಿಯ ಸಾಂಕ್ರಮಿಕ ರೋಗದ ಸಂಕಷ್ಟ ಕಾಲದಲ್ಲಿಯೂ ಸಹ ತಮ್ಮ ಪ್ರಾಣ ಒತ್ತೆ ಇಟ್ಟು, ಸಂಸಾರ ಮಕ್ಕಳಿಂದ ದೂರವಿದ್ದು, ಮಾಸ್ಕ್, ಪಿ.ಪಿ.ಈ ಕಿಟ್ ಧರಿಸಿ ಆಸ್ಪತ್ರೆಗಳಲ್ಲಿ ನಿಷ್ಠೆ, ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿ ಕೋವಿಡ್ 19 ರ ವಿರುದ್ದ ಹೋರಾಡಿದ ಸೇವೆ ಅತ್ಯಮೂಲ್ಯವಾದದ್ದು. ತಮ್ಮ ಪ್ರಾಣವನ್ನು ಲೆಕ್ಕಿಸದೇ ಜೀವರಕ್ಷಕರಾಗಿ ದುಡಿದ ಇವರಿಗೆ ಕೃತಜ್ಞತೆ ಸಲ್ಲಿಸಬೇಕು. ತಜ್ಞ ಫಾರ್ಮಾಸಿಸ್ಟ್‌ರು ಜಗತ್ತಿನಾದ್ಯಂತ ಔಷಧ ಇಲ್ಲದ ಹಲವಾರು ರೋಗಗಳಿಗೆ ನೂತನ ಔಷಧಿಗಳಿಗಾಗಿ, ಅನ್ವೇಷಣೆ, ಸಂಶೋಧನೆ ನಡೆಸುತ್ತಿದ್ದಾರೆ. ನಮ್ಮ ಭಾರತದ ಫಾರ್ಮಾಸ್ಯುಟಿಕಲ್ ಉದ್ದಿಮೆ ಎಷ್ಟು ಬೆಳಿದಿದೆ ಎಂದರೆ ಪ್ರಪಂಚದಲ್ಲಿ ಪ್ರತಿಯೊಬ್ಬರು ತೆಗೆದುಕೊಳ್ಳುವ ಪ್ರತಿ 3 ಮಾತ್ರೆಗಳಲ್ಲಿ 1 ಮಾತ್ರೆ ಭಾರತದಲ್ಲಿ ತಯಾರಾಗುತ್ತದೆ ಎಂದು ಹೇಳಲು ಹೆಮ್ಮೆಯೆನುಸುತ್ತಿದೆ. ಪ್ರಪಂಚದ 1/3 ಭಾಗದ ಔಷಧವು ಹಾಗೂ ಲಸಿಕೆಗಳು ಭಾರತದಲ್ಲಿ ತಯಾರಾಗುತ್ತವೆ. ಕಳೆದ ಮೂರು ವರ್ಷಗಳಿಂದಲೂ ಕಾಡಿದ ಕರೋನ ಮಹಾಮಾರಿಯ ಸಾಂಕ್ರಮಿಕ ರೋಗಕ್ಕೆ ಲಸಿಕೆಯನ್ನು ಪ್ರಪ್ರಥಮ ಬಾರಿಗೆ ಕಂಡು ಹಿಡಿದು ಭಾರತಾದ್ಯಂತವಲ್ಲದೇ, ಜಗತಿನಾದ್ಯಂತ ಹಲವಾರು ರಾಷ್ಟ್ರಗಳಿಗೆ ಸರಬರಾಜು ಮಾಡಿ ಕರೊನ ಹೆಮ್ಮಾರಿಯನ್ನು‌ ನಿಯಂತ್ರಿಸಿದ್ದು ನಮ್ಮ ಭಾರತದ ಫಾರ್ಮಾಸೂಟಿಕಲ್ ಉದ್ದಿಮೆ ಎಂದು ಹೇಳಲು ಹರ್ಷವೆನೆಸುತ್ತದೆ. ಔಷಧ ವಿಜ್ಞಾನ ಕ್ಷೇತ್ರದಲ್ಲಿ ಜಾಗತಿಕವಾದ ಜ್ಞಾನ ವಿನಿಮಯ, ಸಂಘಟನೆ, ಜನಪರ ಕಾಳಜಿ, ಗುಣಮಟ್ಟ ಕಾಯ್ದುಕೊಳ್ಳುವಿಕೆ, ಇತ್ಯಾದಿ ಮಹತ್ತರ ಉದ್ದೇಶಗಳನ್ನು ಪ್ರತಿಪಾದಿಸುತ್ತಾ ಪ್ರಪಂಚದ ಪ್ರತಿ ಮೂಲೆ ಮೂಲೆಯಲ್ಲಿಯೂ ಸಹ ಆರೋಗ್ಯವನ್ನು ಸುಧಾರಿಸುವುದರಲ್ಲಿ ಫಾರ್ಮಾಸಿಸ್ಟ್ ರ ಪಾತ್ರವನ್ನು ಉತ್ತೇಜಿಸುವ ಮತ್ತು ಪ್ರತಿಪಾದಿಸುವ ಚಟುವಟಿಕೆಗಳನ್ನು ಉತ್ತೇಜಿಸುವ ಕಾರಣಗಳಿಂದ ಹಾಗೂ ಫಾರ್ಮಾಸಿಸ್ಟ್‌ರಿಗೆ ಗೌರವಿಸುವ ಸಲುವಾಗಿ ಹಾಗೂ ಈ ವೃತ್ತಿಯ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ವಿಶ್ವ ಫಾರ್ಮಾಸಿಸ್ಟ್ ದಿನಾಚರಣೆಯನ್ನು ಪ್ರತಿ ವರ್ಷ-ಸೆಪ್ಟೆಂಬರ್ 25ನೇ ತಾರೀಕಿನಂದು ಆಯೋಜಿಸಲಾಗುತ್ತಿದೆ.




Comments (0)

Please login to post a comment